Monday, December 27, 2010

ನಮ್ಮನೆ ಡಿಕ್ಷನರಿ!!!!

English Words:
Body Maalotion :- Body Lotion
Lab Tep :- Laptop
oint mint :- Any Liquid
ಗೈಪಿಸಿ HT :- Maruthi GypsyHT
General Porafit :- General Power of Attorney
polty pive :- Fourty Five
Twatwal Pyaadu :- Total Mall Pears fruit



Kannada Words:
ಇದುಪಿಟ್ಟಿಕ್ಕಿ  :- ಇಲ್ಲಿ
ಬೊಂಗಡಿ  ಬೆಟ್ಟ    :- Applicable to any Hill
ನಿಕ್ಕಿ   :- ರಶ್ಮಿ
ಶಿಡಿಬಿಟ್ಟಿ :- A phonetic expression to notify the completion of a given task!!
ಡಿಂಗ :- Any living person
ಶಿಂಗೆರ್ಬಿಲ್ಲಿ  :- A word occasionally used to address a person when the counterpart is in extreme love with him/her.
ಶಿಗ್  :- An expression that comes out from a person when he kicks somebody else's a*s.
ಇದುಮಿಡಿ  ಶಿಡಿಬಿಟ್ಟಿ  ಬಿಡಿಕಿ :- I dont know the meaning of it and nobody could define it till now ! Still we use it!
ಹಪನಕ್ಕಿ: -  A flying object,mostly bird
ತೆಳದಾಂಗ್ ಮಾಡ : -  Do whatever you want
ತೆಳದಾಂಗ್ : - I dint like what you are saying ,stop it!!
ಹುಳ  -  Any family member
ಅಕ್ರಮ ಸ್ಫೋಟಕ ಸಾಗಣಿಕೆ :- Somebody is carrying some crackers 
ಪಿಗಳಾರ್  ಹಕ್ಕಿ :-  something that oscillates!!
ಪಿಟ್ರಿ  : Rashmi's mobile
ನೋಡ್ಲಾಸ್  :-  Noodles
ಮಶಿನ್ಗಾಡ :- Any close friend
FM : - Full ಮಜಾ 
International : -  Extreme Level ( Ex: International ಮಜಾ )
ಡ್ಯಾಡ್ಲಿ    :- Deadly


 Unknown Language:
 Yaambal  : Who knows.





Wednesday, December 22, 2010

Honey ಗೊಂದು "ಹನಿಗವನ" !!!

                   
                 Often we believe "marriages are made in heaven".But in my case it was made in a coffee day!!!..I strongly believe ' A Lot can happen over a coffee'.... :)  Every happening out of the "Lot" are still green and feels as if it was yesterday!!!!I still remember the shy that slipped as a smile from the edge of your lips n I wish I could treasure it!!!..The shine in your eyes and the in-vain attempt to refrain yourself from  looking at me from the corner of your eyes are unforgettable!!....The shock waves passed when the eyes met are  still shocking!!!....I smiled without my knowledge for finally finding the smile of my life !!!! ....Life without you has no reason to live dear!!!!

      ಭಾವನೆಗಳ ಭ್ರಮರದ ರೆಕ್ಕೆ ನೀನು
          ಶ್ರಾವಣಿಯ ಶಶಿಕಿರಣನ ಬೆಳಕು ನೀನು
       ಅವನಿಯ ಅಧಿಪತಿಯ ಅರಸಿ ನೀನು
    ಗೊಂಬೆ ನಾನಾದರೆ ಮುದ್ದು ನೀನು.
ಮನಸು ನಾನಾದರೆ ಮನದ ಮಾತು ನೀನು
       ಛೆ..ನಮ್ಮಿಬ್ಬರ ಮಧ್ಯೆ  ಇದೇನಿದು ನಾನು -ನೀನು..?!!!


Congratulations sweet  heart!!.......Its the 4th month!!!!!.....love you ever!!!!!!!



Tuesday, December 21, 2010

I wish ..I could!!!!!!



                             ಯಾವತ್ತೋ ಒಮ್ಮೆ ಸಾಕಷ್ಟು  ಸಮಯವಿದ್ದಾಗ  , ಆಫೀಸಲ್ಲಿ ಕೆಲಸವಿಲ್ಲವಾದಾಗ ,ಮನಸ್ಸು ಲಂಗುಲಗಾಮಿಲ್ಲದ ಭಾವನೆಗಳ  ಬೆನ್ನೇರಿ ಕಳೆದುಹೋಗುವದು ಸಹಜ . ಬಹುಶ ಅಂತ ಸಂಧರ್ಭಗಳಲ್ಲ್ಲಿಎಲ್ಲರ  ಭಾವನಾ ಲಹರಿ ಹರಿಯುವದು ಹೆಚ್ಚಾಗಿ ಒಂದು ವಿಷಯದ ಬಗ್ಗೆ , ಅದೇ "ಒಂದು ವೇಳೆ  ನಾನು  ಇದನ್ನು ಮಾಡ ಬಹುದಾಗಿದ್ರೆ ..!!!!!!!......"  , ಅಂದರೆ  ಅತಿಶಯೋಕ್ತಿಯಾಗದೆಂದು ಭಾವಿಸಿದ್ದೇನೆ.
                                                     
                            
ಹಾಗೆ   ನನಗನ್ನಿಸುವುದೇನೆಂದ್ರೆ  "ಒಂದುವೇಳೆ ನಾನು ಕಾಲಚಕ್ರವನ್ನು  ೨೫ ವರ್ಷ ಹಿಂದೆ ತಿಗುಗಿಸುವಂತಾಗಿದ್ರೆ???..!!!!  "  ಅಂತ.ಯಾಕೆ ನಾನಷ್ಟು ನಿಖರವಾಗಿ ೨೫ ವರ್ಷ ಎಂದು ಹೇಳಿದ್ದೇನೆ ಎಂಬುದು  ಈ ನನ್ನ ಬ್ಲಾಗ್  ಕೊನೆಯ ಸಾಲು ಓದುವವರೆಗೆ ನಿಮಗೆ ತಿಳಿದಿರುತ್ತದೆ!!!!!

                              
ಅದೊಂದು ಪುಟ್ಟ ಹಳ್ಳಿ, ಇನ್ನೇನು ಆಗಲೋ ,ಈಗಲೋ  ಮುರಿದುಬೀಳುವಂತೆ ಕಾಣುವ ಮನೆಯ  ಚಪ್ಪರವನ್ನು ಒಣಗಿದ ಸೋಗೆ ,ಹುಲ್ಲಿನ ಮುಚ್ಚಳಿಕೆಯಿಂದ ಕಾಪಾಡಿರುವ - ಮನೆಗಳೇ ಹಳ್ಳಿಯ ಅಸ್ತಿತ್ವ ಕಾಪಾಡುವ ಯೋಧರಾಗಿದ್ದವು. ಕಿ.ಮಿ ಉದ್ದ ಕಿ.ಮಿ ಅಗಲ ವಿಸ್ತೀರ್ಣದ ಹಳ್ಳಿಗೆ ,ಸುತ್ತಲೂ ಆವರಿಸಿದ  ೩೦ ಕಿ.ಮಿ ಉದ್ದ ೧೦ ಕಿ,ಮಿ ಅಗಲ ವಿಸ್ತೀರ್ಣದ ದಟ್ಟ ಅರಣ್ಯವೇ ಬೇಲಿಯಾಗಿತ್ತು. ಹಳ್ಳಿಗೆ  ಕೇವಲ್ ಕಿ.ಮಿ ಕಾಲ್ನಡಿಗೆ ದೂರದಲ್ಲಿ " ಗಂಗಾವತಿ "ನದಿ  ಹರಿಯುತ್ತಿತ್ತು.ಕಾಲ್ನಡಗೆಯ ದೂರ ಅನ್ನಲು ಕಾರಣವೇನೆಂದರೆ  ಚಲಿಸುವ ಯಾವುದೇ ಮಾನವ ನಿರ್ಮಿತ ಯಂತ್ರವ ಖರಿದಿಸುವ ಶಕ್ತಿ ಊರಿನ ಅತ್ಯಂತ ಶ್ರೀಮಂತ ವ್ಯಕ್ತಿಗೂ ಸಹ ಇರಲಿಲ್ಲ .ಇನ್ನು ಸರ್ಕಾರಕ್ಕೆ ಹಳ್ಳಿಯ  ಅಸ್ತಿತ್ವದ ಬಗ್ಗೆಯೂ ತಿಳಿದಿರಲ್ಲಿಲ್ಲ .ಹಾಗಾಗಿ ಬೇರೊಂದು ಮಾರ್ಗದ ಅರಿವೂ  ಸಹ ಇಲ್ಲದ  ಹಳ್ಳಿಗರಿಗೆ ಕಿ.ಮಿ ಕಾಲ್ನಡಿಗೆ ಪ್ರಯಾಸವೇ ಅನಿಸುತ್ತಿರಲ್ಲಿಲ್ಲ.ಗಂಗಾವತಿ ನದಿಯೇ ಹಳ್ಳಿಯನ್ನು ಪಟ್ಟಣದಿಂದ ಬೇರ್ಪಡಿಸಿ ಹಳ್ಳಿಯ ಸೊಬಗನ್ನು ಕಾಪಾಡಲು ಸಹಾಯ ಮಾಡಿತ್ತು.ಆಧುನಿಕತೆಯ ಕಪಿಮುಷ್ಟಿಯಿಂದ ದೂರವಿದ್ದ ಹಳ್ಳಿಗೆ   ಹೊರಪ್ರಪಂಚದ ಅರಿವಿನ ಏಕಮಾತ್ರ ಸಾಧನವೆಂದರೆ ಬ್ಯಾಟ್ಟೆರಿ  ಚಾಲಿತ "ರೇಡಿಯೋ" ಹಾಗು ಅದರಲ್ಲಿ ಪ್ರಸಾರವಾಗುವ ಆಕಾಶವಾಣಿ ಕಾರ್ಯಕ್ರಮಗಳು. ಊರಿನ ಜನರೆಲ್ಲಾ ಪ್ರತಿಯೊಂದು ಬ್ಯಾಟರಿಯನ್ನೂ ಸದ್ಯವದಷ್ಟೂ ಸಲ ಕಾಯಿಸಿ ಪುನಃ ಉಪಯೋಗಿಸಿ  "ಗಿನ್ನೆಸ್ಸ್  ರೆಕಾರ್ಡ್ ಫಾರ್ ಲಾಂಗ್ ಲಾಸ್ಟಿಂಗ್ ಬ್ಯಾಟ್ರಿಸ್ " ಅನ್ನು ಮುರಿದು ,ಆಕಾಶವಾಣಿಯಲ್ಲಿ ಪ್ರಸಾರವಾಗುವ " ವಿದುಚ್ಚಕ್ತ್ಹಿಯ ಅನುಕೂಲಗಳು" ಕಾರ್ಯಕ್ರಮವನ್ನು ತಪ್ಪದೆ ಕೇಳುತ್ತ ,ನಮ್ಮೊರಿಗೂ ಕರೆಂಟ್ ಬರುವ ಕನಸು ಕಾಣುತ್ತ ಜೀವನ ಸಾಗಿಸುತ್ತಿದ್ದರು!!!!          

                          ಊರ ಹಿಂಭಾಗದ  ಬೆಟ್ಟದಿಂದ ರಮಣೀಯವಾಗಿ ಹರಿದು ಬಿಳಿ ಮಲ್ಲಿಗೆ ಹಾರದಂತೆ ಕಾಣುವ ಚಿಕ್ಕ ತೊರೆಯಂದು ಊರಿನ ಶೋಭೆಗೆ ಇನ್ನಷ್ಟು ಮೆರಗು ಕೊಟ್ಟಿತ್ತು. ಅದೇ ತೊರೆ ಊರಲ್ಲಿ ಹಳ್ಳವಾಗಿ ಹರಿದು ಊರ ರೈತರ ಜೀವಧಾರೆಯಾಗಿತ್ತು. ಹಸಿರಾದ ಭತ್ತದ ಗದ್ದೆ,ಅಡಿಕೆ,ತೆಂಗಿನ ತೋಟಗಳು ಸುತ್ತಲೂ ಆವರಿಸಿದ ದಟ್ಟ ಹಸಿರು  ಕಾಡಿನ ನಡುವೆ ಕಂಡೂ ಕಾಣದಂಥಾಗಿದ್ದವು.   ಚಿಕ್ಕ ಊರಿನಲ್ಲಿ ಮಿತ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬನೂ ಹಿತವಾಗಿ ಜೀವನ ಸಾಗಿಸುತ್ತಿದ್ದರು .ಊರಿನ ಗಂಡಸರಿಗೆ ದಿನದ ಸಮಯ ತೋಟ,ಗದ್ದೆಯಲ್ಲಿ ಕಳೆದರೆ ,ಹೆಂಗಸರಿಗೆ ಮನೆ ಮಂದಿಯ ಜೊತೆ ಹತ್ತಾರು ಆಳು-ಕಾಳಿಗೆ  ಅಡಿಗೆ ಮಾಡುವದರಲ್ಲೇ ಕಳೆಯುತ್ತಿತ್ತು.  ಸಂಜೆಯ ಸಮಯ "ಆಕಾಶವಾಣಿ " ಕಾರ್ಯಕ್ರಮದ ಜೊತೆಗೆ ಕೊನೆಯಾಗುತ್ತಿತ್ತು.

                        
ಊರಿನ ಮಧ್ಯಭಾಗದಲ್ಲಿ ,ಹಳ್ಳದ ಎಡಮಗ್ಗುಲಲ್ಲಿರುವ  ಹಂಚಿನ ಮನೆಯೇ ಅನಂತ ಭಟ್ಟರ ಮನೆ.ಭಟ್ಟರ ಮನೆಯ ಕಾಂಪೌಂಡ್ ಹೊಕ್ಕರೆ ಮೊದಲು ಸಿಗುವದು ಎರಡೂ ಪಕ್ಕದಲ್ಲೂ ಸಾಲಾಗಿ ನೆಟ್ಟಿರುವ ತೆಂಗಿನ ಗಿಡಗಳು.ಭಟ್ಟರ ಹೆಣ್ಣುಮಕ್ಕಳು ವಿಶೇಷ ಪ್ರೀತಿಯಿಂದ ಬೆಳೆಸಿರುವ ದಾಸವಾಳಗುಲ್ಮೊಹರ್, ಅಶೋಕಕಾಗದದ ಹೂಗಳ ಗಿಡಗಳು ದಾರಿಯುದ್ದಕ್ಕೂ ಕೈಬೀಸಿ ಕರೆಯುತ್ತಿರುತ್ತವೆ.ಕಂಪೌನ್ಡಿನಿಂದ ಸುಮಾರು ೩೦೦ ಮೀಟರ್ ದೂರದಲ್ಲಿ ಭಟ್ಟರ ಅಂಕಣದ ವಿಶಾಲವಾದ ಮನೆ .ಮನೆಯ ಸುತ್ತಲು ಹತ್ತಾರು ಬಗೆಯ ಹೂಗಿಡಗಳು .ಎಡಪಕ್ಕದಲ್ಲಿ ಕೊಟ್ಟಿಗೆ .ಕೊಟ್ಟೆಗೆಯ ಪಕ್ಕದಲ್ಲೇ ತೊಂಡೆಕಾಯಿ ಚಪ್ಪರ .ಅಂಗಳದಲ್ಲಿ ಭಡ್ತೀರು - ಹೆಣ್ಣಾಳುಗಳ ಸಹಾಯದಿಂದ ಬೆಳೆಸಿದ ಸೌತೆಕಾಯಿ, ಹೀರೆಕಾಯಿ ಬಳ್ಳಿಗಳು. ಅಂಗಳದುದ್ದಗಲಕ್ಕು  ಅಡಿಕೆ ಒಣಗಿಸಲೆಂದು  ಅಡಿಕೆ ದಬ್ಬೆಯಿಂದ ನಿರ್ಮಿಸಿದ ಚಪ್ಪರ .ಮನೆಯ ಸುತ್ತಲು ನಡೆದಾಡಲು ನಿರ್ಮಿಸಿದ ಚಿಟ್ಟೆ .ಮನೆಯ ಬಲಭಾಗದಲ್ಲಿ  ಮಳೆಗಾಲದಲ್ಲಿ  ಅಡಿಕೆ ಒಣಗಿಸಲೆಂದು ಕಟ್ಟಿದ ಬಿಜಾಣಿಗೆ. ಭಟ್ಟರದು ಹೆಂಡತಿ, ಹೆಣ್ಣು ಹಾಗು ಗಂಡು ಮಕ್ಕಳ ಮುದ್ದಾದ ಸಂಸಾರ. ಹಿರಿಯ ಮಗ ಜಗದೀಶನದು ಮೊದಲಿಂದಲೂ ಸ್ವಲ್ಪ ಹಟದ ಸ್ವಭಾವ .ಆದ್ರೆ ಅದು ಅಪ್ಪನ ಜೊತೆ ಮಾತ್ರ ಸೀಮಿತ. ಎರಡನೆಯ ಮಗಳೇ ವತ್ಸಲ ,ಕೊನೆಯವಳು ದೇವಕಿ. ಸುಮಾರು ೧೫-೨೦ ದನಕರುಗಳು , -  ಎಕರೆ ತೋಟ ಹೊಂದಿರುವ ಭಟ್ಟರು ಊರಿಗೆ ೬ ಸೆಲ್ಲಿನ  ರೇಡಿಯೋ  ಹೊಂದಿರುವ ಮೊದಲ ವ್ಯಕ್ತಿ. ಭಟ್ಟರ ಮನೆಯ ಕೆಲಸಕ್ಕೆ ಹತ್ತಾರು " ಸಿದ್ದಿ " ( A tribal community which is seen only in north canara district,yellapura taluk .) ಆಳುಗಳು.ಭಟ್ಟರ ಹೆಂಡತಿ ವಿಶಾಲಾಕ್ಷಿ , ಒಂದು ಕಾಲಿಗೆ ಚಿಕ್ಕಂದಿನಲ್ಲೇ ಪೋಲಿಯೋ ಹೊಡೆದು ಬಲಹೀನರಾಗಿದ್ದರೂ    ದಿನಕ್ಕೆ ೧೦-೨೦ ಜನಕ್ಕೆ ಅಡುಗೆ ಮಾಡಿಹಾಕುವ ಚುರುಕುತನ ಹೊಂದಿದ್ದರುಆಳುಗಳಿಗೆಲ್ಲ  "ಭಡ್ತೀರ " ( ಭಟ್ರ ಹೆಂಡತಿಕಂಡ್ರೆ ಬಲು ಪ್ರೀತಿ .ಮಧ್ಯಾಹ್ನದ ಬಿಸಿಲಲಿ ಬಳಲಿ ಬಂದ ಆಳುಗಳಿಗೆ ಉಪ್ಪು ಮಜ್ಜಿಗೆ, ನೀರು ಬೆಲ್ಲ ಕೊಡುವದೆಂದರೆ ಭಡ್ತೀರಿಗೂ ಬಲು ಖುಷಿ.ಮಲೆನಾಡ ಮಧ್ಯಭಾಗದಲ್ಲಿ ಹೀಗೆ ಸಾಗಿತ್ತೊಂದು ಸವಿ ಬದುಕು .

                      
ಅನಂತ ಭಟ್ಟರ ಮಾತೆಂದರೆ ಊರ ಮಂದಿಗೆಲ್ಲ ಏನೋ ವಿಶೇಷ ಮರ್ಯಾದೆ.ಊರಿನ ಯಾವುದೇ ಕಾರ್ಯ/ಕೆಲಸಗಳಿಗೆ ಮುಂದಾಗಿ ಸಾಗುವವರು ಅನಂತ ಭಟ್ಟರು. ಬಹು ವರ್ಷಗಳ ನಂತರ ಕೆ..ಬಿ  ಇಲಾಖೆಯಲ್ಲಿ ಹೋರಾಡಿ ಊರಿಗೆ ಕರೆಂಟ್ ತರುವಲ್ಲಿ ಭಟ್ಟರದೆ ಮೇಲುಗೈ. . ಊರ ಮಧ್ಯೆ ಇದ್ದ ಈಶ್ವರನ ದೇವಸ್ಥಾನಕ್ಕೆ ದೂರದ ಕುಮಟಾದಿಂದ ಕಲ್ಲಿನ ವಿಗ್ರಹ ಮಾಡಿಸಿ ಪ್ರತಿಷ್ಟ್ಹಾಪಿಸಿದ್ದರು.ಈಶ್ವರ ಪರಮ ಭಕ್ತನಾದ ಭಟ್ಟರು  ಪ್ರತೀ  ಸೋಮವಾರ ತಪ್ಪದೆ ಈಶ್ವರ ಪೂಜೆ ಮಾಡುತ್ತಿದ್ದರು. ದಿನವೆಲ್ಲ  ತೋಟದಲ್ಲಿ ಆಳುಗಳೊಂದಿಗೆ ಕಳೆಯುವ ಭಟ್ಟರಿಗೆ ,ಸಂಜೆಯಾದಂತೆ ರೇಡಿಯೋ ಬೇಕೇ ಬೇಕು. " ಕೃಷಿ ಸಮಾಚಾರ" ," ವಾರ್ತೆಗಳು " ಇವೆಲ್ಲ ಕೇಳಾದ ಮೇಲೆ ಭಟ್ಟರ ಹೆಂಡತಿ ಊಟಕ್ಕೆ ತಯಾರಿ ಮಾಡುವದು. ಒಮ್ಮೊಮೆ ಭಟ್ಟರ ಹೆಂಡತಿಯೂ  ರೇಡಿಯೋ ಕೇಳಲು ಭಟ್ಟರು ಮತ್ತು ಹತ್ತಾರು ಆಳುಗಳು ಕುಂತಿರುವ ಜಗುಲಿಗೆ ಬಂದು ಮೇಲ್ಜಗಲಿಯ ಕಪಾಟುಕಂಬದ  ಬುಡದಲ್ಲಿ ಕೂಡುವುದುಂಟು ಮೇಜಿನ ಪಕ್ಕದ ಮರದ ಕೂರ್ಚಿಯಲ್ಲಿ ಎಡಗಾಲನ್ನು ಮಡಚಿ,ಬಲಗಾಲನ್ನು ಕೆಳಬಿಟ್ಟು ವಿಶೇಷವಾದ ಗಾಂಭೀರ್ಯ ಭಂಗಿಯಲ್ಲಿ ಭಟ್ಟರು ಕುಳಿತಿರುತ್ತಿದ್ದರುಕೆಳಜಗುಲಿಯ ಎಡಭಾಗದಲ್ಲಿ , ಸೀಮೆ ಎಣ್ಣೆ ದೀಪದ ಬೆಳಕನ್ನೇ  ಯಾವದೋ ಒಂದು ಹಣ್ಣು ಎಂದು ತಿಳಿದು ಪಟ ಪಟನೆ ಹಾರಿ ಬಂದು ತಿನ್ನಲು ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ  ಹಾತೆ ,ತುಂಬೆ ಹುಳಗಳ ಕಡೆಗೆ ನೆಪಮಾತ್ರಕ್ಕೆ ನೋಡುತ್ತಿರುವ  ಆಳುಕಾಳುಗಳು ,ರೇಡಿಯೋದಿಂದ ಹರಿದು ಬರುತ್ತಿರುವ ವಾರ್ತೆಗಳತ್ತ ಸಂಪೂರ್ಣ ಲಕ್ಷವಿರಿಸಿ ಕೆಳುತ್ತಿದ್ದರು.ಅರೆ,ಬೆರೆ ಬೆಂದು ಅರೆಜೀವವಾದ ಹುಳಗಳು ಆಳುಗಳ ಮಕ್ಕಳ ರಾತ್ರಿಯಾಟದ ಆಟಿಕೆಗಳಾಗುತ್ತಿದ್ದವು .ಹಾಗೆ ಒಟ್ಟಾಗಿ ಕುಳಿತಾಗ ದೂರದಲ್ಲೆಲ್ಲೋ ತುಫಾಕಿ ಸಿಡಿಸಿದ ಸದ್ದು ಭಟ್ಟರ ಹುಬ್ಬೇರುವಂತೆ ಮಾಡಿದ್ದೂ ಉಂಟು !!.
                                 
                    
ಕಾಲ ಕಳೆದಂತೆ ಭಟ್ಟರ ಮಕ್ಕಳು ದೊಡ್ಡವರಾಗುತ್ತಾರೆ. ಹಿರಿಮಗಳು ವತ್ಸಲಳಿಗೆ ದೂರದ ಕುಮಟೆಯ ಶೇಂಗ ವ್ಯಾಪಾರಿ ಗಜಾನನ ಜೋಯಿಸರ ಹಿರಿಮಗನ ಜೊತೆ ವಿವಾಹವಾಗುತ್ತದೆ.ವತ್ಸಲಳಿಗೆ ಗಂಡು ಮಕ್ಕಳೂ ಆಗುತ್ತವೆ. ಭಟ್ಟರ ಹಿರಿ ಮಗ ಜಗದೀಶ ಗಂಗಾವತಿ ನದಿ ದಾಟಿ - ಕಿ.ಮಿ ದೂರದ ಗುಳ್ಳಾಪುರದಲ್ಲಿ ಚಿಕ್ಕದೊಂದು "ಮಲೆನಾಡು ವುಡ್ ಇಂಡಸ್ಟ್ರಿ "  ಶುರುಮಾಡಿರುತ್ತಾನೆ.ಕಿರಿಮಗಳು ದೇವಕಿಗೆ ಮೂಲತಃ ಸಿರಸಿಯ ,ದೂರದ ಭಟ್ಕಳದಲ್ಲಿ  ಗೋದ್ರೆಜ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಚಂದ್ರಶೆಖರನೊಡನೆ ವಿವಾಹವಾಗಿರುತ್ತದೆ.ಕಿರಿಮಗಳಿಗೆ ಆಗಿನ್ನೂ ಚೊಚ್ಚಲ ಹೆರಿಗೆ . ದೊಡ್ಡಮಗಳ ಜೀವನ ಅಂಥಾ ಚೆನ್ನಾಗಿರದಿದ್ದರು,ಚಿಕ್ಕ ಮಗಳ ಜೀವನ ಸುಂದರವಾಗಿ ಸಾಗುತ್ತಿರುವದಲ್ಲ ಎಂದು ಭಟ್ಟರು ಸಮಾಧಾನ ಪಡುತ್ತಿರುತ್ತಾರೆ. ಇನ್ನು ಹಿರೀ  ಮಗ ಜಗದೀಶನಿಗೆ ಹೆಣ್ಣು ಹುಡುಕಿದರೆ ನನ್ನ ಜವಾಬ್ಧಾರಿ  ಮುಗಿಯುತ್ತೆನ್ನುವ  ಆಲೋಚನೆಯಲ್ಲೇ ಭಟ್ಟರು ಜೀವನ ಸಾಗಿಸುತ್ತಿರುತ್ತಾರೆ.

                  
ಭಟ್ಟರದು ಬಹು ದೊಡ್ಡ ಕುಟುಂಬ.ಭಟ್ಟರ ಅಣ್ಣ ಮತ್ತು ತಮ್ಮ ಇಬ್ಬರೂ ಹತ್ತಿರದ ಯೆಲ್ಲಾಪುರದಲ್ಲಿ ಪಿತ್ರಾರ್ಜಿತವಾಗಿ  ಬಂದ ಆಸ್ತಿಯನ್ನು ನೋಡಿಕೊಂಡಿರುತ್ತಾರೆ. ದುರಾಸೆಯ ಹೆಸರೂ ಕೇಳರಿಯದ ಭಟ್ಟರು ತಮಗೆ ಇಲ್ಲಿರುವ ಆಸ್ತಿಯೇ ಸಾಕೆಂದು ಉಳಿದ ಆಸ್ತಿಯನ್ನು ,ಅಣ್ಣ ತಮ್ಮನಿಗೆ ಕೊಟ್ಟು ಬಂದಿದ್ದರು. ಹೀಗಾಗಿ ಭಟ್ಟರ ಕಂಡರೆ ಮನೆಯವರಿಗೆಲ್ಲ ತುಂಬಾ ಅಭಿಮಾನ. ಅನಂತ ಭಾವ, ಅನಂತ ಅಪ್ಪಚ್ಚಿ, ಅನಂತ ಅಜ್ಜ ,ಅನಂತ ಅಣ್ಣ ...ಹೀಗೆ ಹಲವಾರು ನೆಚ್ಹಿನ ಸಂಬಂಧವನ್ನು ಭಟ್ಟರು ಹೊಂದಿದ್ದರು. ಭಟ್ಟರ  ಅಣ್ಣನಿಗೆ ಇಬ್ಬರು ಮಕ್ಕಳು ( ಶಂಕರ ಮಾವ  ,ಮರಿ ದೊಡ್ಡಮ್ಮ ) ಅವರಿಬ್ಬರಿಗೆ ಸೇರಿ   ಗಂಡು ( ಗಿರೀಶ, ಮಂಜುನಾಥಮತ್ತು ( ವಿದ್ಯಾ,ವೀಣಾ,ಪವಿತ್ರ ಮತ್ತು ಮಧುರಹೆಣ್ಣುಮಕ್ಕಳು  .ಇನ್ನು ಭಟ್ಟರ ತಮ್ಮನಿಗೂ ಒಂದು ಗಂಡು ಒಂದು ಹೆಣ್ಣು ಮಗು( ಗಿಡಗಾರಿ ಚಿಕ್ಕಮ್ಮ,ಪುಟಿಮಾವ)  . ಹೆಣ್ಣು ಮಗಳಿಗೆ ಮದುವೆಯಾಗಿ ಮಕ್ಕಳಿದ್ದರು( ಪವನ, ಪಲ್ಲವಿ)  ,ಮಗನಗಿನ್ನೂ ಮದುವೆಯಾಗಿರಲ್ಲಿಲ್ಲ.  ಹೀಗಾಗಿ ರಜೆಯಲ್ಲಿ ಎಲ್ಲರೂ ಒಟ್ಟಾಗಿ ಭಟ್ಟರ  ಮನೆಯಲ್ಲಿ ಸೇರುತ್ತಿದ್ದರು.ಬೇಸಿಗೆ ರಜೆ ಬಂತೆಂದರೆ ಸಾಕು ಭಟ್ಟರ ಮನೆಯಲ್ಲಿ ೩೦-೪೦ ಜನ ಒಟ್ಟಾಗುತ್ತಿದ್ದರು.ಪ್ರತಿಯೊಂದು ಸಂಬಂಧಿಕರಿಗೂ ವರ್ಷಕೊಮ್ಮೆ ಅನಂತ ಭಟ್ಟರ ಮನೆಗೆ ಹೋಗಿ ಬರದಿದ್ದರೆ ಸಮಾಧಾನವೇ ಇರುತ್ತಿರಲ್ಲಿಲ್ಲ. ನೆಂಟರು ಬಂದರೆಂದರೆ ಭಟ್ಟರ ಹೆಂಡತಿಗೂ ಬಾರೀ ಕುಶಿ. ಅಡುಗೆ ಮನೆ ಹೆಂಗಸರ ಕಲರವದಿಂದ ತುಂಬಿದರೆ, ಜಗುಲಿ ತುಂಬೆಲ್ಲ ಕಂಬಳಿ,ಜಮಖಾನ ಹಾಸಿಯೇ ಇರುತ್ತಿತ್ತು.ಇನ್ನು ಅಂಗಳದಲ್ಲಿ ಹಾಕಿರುವ ಸೌತೆಕಾಯಿ ಚಪ್ಪರ ಭಟ್ಟರ ಮೊಮ್ಮಕ್ಕಳ ದಾಳಿಗೆ ನುಚ್ಚು ನೂರಾಗುತ್ತಿತ್ತು.   ಬೇಸಿಗೆ ರಜೆಯ ತಿಂಗಳು ಕಾಲ ಭಟ್ಟರ ಮನೆಯಲ್ಲಿ ನಿತ್ಯವೂ ಹಬ್ಬ.  ಎಲ್ಲ ಸಂಭಂಧಿಕರನ್ನು ಪ್ರೀತಿಯಿಂದಲೇ ನೋಡಿಕೊಂಡು ಅವರು ವಾಪಾಸ್ ಹೋಗುವಾಗ, ಚಿಕ್ಕ ಮಕ್ಕಳಿಗೆ -೧೦ ರುಪಾಯೀಯಂತೆ , ದೊಡ್ಡವರಿಗೆ ೨೦ ರುಪಾಯಿ ಕೊಟ್ಟು ಕಳಿಸುತ್ತಿದ್ದರು.   

              
ಭಟ್ಟರಿಗೆ ಇಸ್ಪೀಟು ಆಟವೆಂದರೆ ಬಹು ಪ್ರೀತಿ. ಯಾರಾದರು ನೆಂಟರು ಬಂದರೆ  ಸಾಕು ಇಸ್ಪೀಟಿನ ಮಂಡಲ ಶುರುವಾಗೇ ಬಿಡುತ್ತಿತ್ತು.ಇಸ್ಪೀಟು ಬಿಟ್ಟರೆ ಭಟ್ಟರ ಇನ್ನೊಂದು ಹವ್ಯಾಸವೆಂದರೆ ದಿನಕ್ಕೆ ೧೦ ಬಾರೆ ಹೆಂಡತಿಯ ಕಯ್ಯಲ್ಲಿ ಮಾಡಿಸಿ ಕುಡಿವ ಟಿ.ಅದರಲ್ಲೂ ಟಿ ಕುಡಿಯುವದರಲ್ಲೂ ಭಟ್ಟರದು ವಿಶೇಷ!!!.ಭಟ್ಟರಿಗೆಂದೆ ಮೀಸಲಾಗಿಟ್ಟ ಕಪ್ಪು-ಬಶೀಯಲ್ಲಿ  ( ಕಪ್ ನ ಸುಸೆರ್)  ಭಡ್ತಿ ಟಿ ತಂದರೆ ಕೆಳಜಗುಲಿಯ ಮೆಟ್ಟಿಲಿನ ಎಡಭಾಗದಲ್ಲಿರುವ ಆರಾಮ್ ಕುರ್ಚಿಯಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತು  ಎಡಗಯ್ಯಲ್ಲಿ ಟಿ ಕಪ್ ಹಿಡಿದು, ಬಲಗಯ್ಯಲ್ಲಿದ್ದ ಬಶಿಯಲ್ಲಿ ಟಿ ಸುರಿದು ತುಟಿಯಂಚಿನಿಂದ ಸೊರ್ರನೆ ಸುರಿದರೇನೆ  ಭಟ್ಟರಿಗೆ ಸಮಾಧಾನ. ಭಟ್ಟರ ಹೆಂಡತಿ ಆಗಾಗ  ಭಟ್ಟರ ಈ ಟಿ ಕುಡಿವ ಚಟದ ಬಗ್ಗೆ ಕಸಿವಿಸಿ ವ್ಯಕ್ತ ಪಡಿಸಿದ್ದುಂಟು ಆದರೂ ಭಟ್ಟರಿಗೆ ದಿನಕ್ಕೆ ಹತ್ತಾರು ಬಾರಿ ಟಿ ಮಾಡಿಕೊಡುವದನ್ನು ಮರೆಯುತ್ತಿರಲ್ಲಿಲ್ಲ. ಟಿ ಕುಡಿದ ನಂತರ ಭಟ್ಟರ ಉದ್ದ ತೋಳಿನ ಬನಿಯನ್ನಿನ್ನ ಒಳಕಿಸೆಯಿಂದ ೩೦ ಮಾರ್ಕಿನ ಮಂಗಳೊರು ಬೀಡಿ  ಕಟ್ಟು ಮತ್ತು "ಚಾವಿ" ಮಾರ್ಕಿನ ಬೆಂಕಿ ಪೊಟ್ಟಣವಿರುವ ಚಿಕ್ಕ ಡಬ್ಬಿಯೊಂದು ನಿಧಾನಕ್ಕೆ ಆಚೆ ಬರುತ್ತಿತ್ತು. ಅಲ್ಲೇ ಬೀಡಿ ಅಂಟಿಸಿ ಒಂದೆರಡು ದಂ ಎಳೆದು ಬೀಡಿ ಬಿಸಾಕಿ ಮತ್ತೆ ಕೆಲಸದ ಕಡೆಗೆ ಭಟ್ಟರ ಗಮನ ಹರಿಯುತ್ತಿತ್ತು.

                 ಭಟ್ಟರ ಹಿರಿಮಗಳು ವತ್ಸಲಳ ಮಕ್ಕಳಂತೂ  ಬೇಸಿಗೆ ರಜೆ ಶುರುವಾದರೆ ಸಾಕು,ರಜೆಯ ಮೊದಲ ದಿನ ಬಂದ ಮಕ್ಕಳು ರಜೆ ಮುಗಿದು ವಾರವಾದ ನಂತರವೇ  ಹೋಗುತ್ತಿದ್ದರು.ಭಟ್ಟರಿಗೆ ಇ  ಮೊಮ್ಮಕ್ಕಳನ್ನು ಕಂಡರೆ ವಿಶೇಷ ಒಲವು. ಹಿರಿ ಮಗಳು ಕಿರಿ ಮಗಳಸ್ಟು ಸುಖದ ಜೀವನ ಸಾಗಿಸಿತ್ತಿಲ್ಲವಲ್ಲ ಎನ್ನುವ ಬಾಧೆಯೂ  ಸಹ ಇದಕ್ಕೊಂದು ಕಾರಣ ವಾಗಿತ್ತ್ತು. ಇಸ್ಟೇ ಅಲ್ಲದೆ ಇನ್ನೊಂದು ಕಾರಣವೂ ಇತ್ತು. ಬೇಸಿಗೆ ರಜೆಯಲ್ಲಿ ಬಂದ ಮಕ್ಕಳು ಸುಮ್ಮನೆ ಮನೆಯಲ್ಲಿ ಕೂಡುತ್ತಿರಲ್ಲಿಲ್ಲ. ಭಟ್ಟರಿಗೆ ಮನೆಗೆಲಸದಲ್ಲಿ ನೆರವಾಗುತ್ತಿದ್ದರು. ೧೦-12 ವರ್ಷ ವಯಸ್ಸಿನ ಈ ಮಕ್ಕಳು ಭಟ್ಟರಿಗೆ ಕೊಟ್ಟಿಗೆ ತೊಳೆಯಲು, ಅಡಿಕೆ ಹೊರಲು,ಸುಲಿಯಲು,ಕುಯ್ಯಲು, ಭಟ್ಟರ ಹೆಂಡತಿಗೆ ( ಆಯಿಗೆ) ಮಳೆಗಾಲಕ್ಕೆ  ಉರುವಲಿಗೆ ಬೇಕಾಗುವ ,ಕಟ್ಟಿಗೆ,ಕಾಯಿಶಿಪ್ಪೆ ಮುಂತಾದವುಗಳ ಸಂಗ್ರಹಣೆಗೆ ಸಹಕರಿಸುವ ರೀತಿ ಊರ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದ್ದ್ದವು. " ಮೂಮಕ್ಕ ಇಬ್ರು ಬಂದ್ರೆ ಅನಂಥಂಗೆ ೪ ಕಯ್ಯಿ ಎಕ್ಷ್ತ್ರ ಬಂದಂಗೆಯ " ಅಂತ ಊರ ಮಂದಿಯೆಲ್ಲ  ಅವರಿಬ್ಬರನ್ನೂ ಪ್ರಶಂಸುತ್ತಿದ್ದರು. ಮೊಮ್ಮಕ್ಕಳನ್ನು ಊರ ಮಂದಿ ಹೊಗಳುವ ರೀತಿಯಿಂದ ಭಟ್ಟರು ಉಬ್ಬಿ ಖುಷಿ ಪಡುತ್ತಿದ್ದರು. ದಿನ ಸಂಜೆ ಹತ್ತಿರದ ಗಜಾನನ ಭಂಡಾರಿ ಅಂಗಡಿಗೆ ಪೇಪರ್ ತರಲು ಹೋಗುವ ಭಟ್ಟರು ಬರುವಾಗ ಮೊಮ್ಮಕ್ಕಳಿಗೆ ಏನಾದರೂ ತರುವದು ವಾಡಿಕೆ. ಮೊಮ್ಮಕ್ಕಳೂ ಅಸ್ತೆ ಎಲ್ಲೇ ಇದ್ದರು ಅಜ್ಜ ಅಂಗಡಿಯಿಂದ ಬರುವ ಹೊತ್ತಾದರೆ ಸಾಕು ಜಗುಲಿಗೆ ಹಾಜರ್!!..ಅಜ್ಜ ಬಂದವನೇ " ಹಿಡಿ .ಮೋಳ." ಎಂದು  ಪ್ರೀತಿಯಿಂದ ಗದರಿ ಕಿರಿ ಮೊಮ್ಮಗನ ಕೈಯಲ್ಲಿ ಹುಳಿ ಪೆಪ್ಪರ್ಮೆಂಟ್ ಪೊಟ್ಟಣ ಇಡುತ್ತಿದ್ದ್ದರು.ಮೊಮ್ಮಕ್ಕಳನ್ನು ವಾಪಾಸ್ ಕುಮಟೆಗೆ ಕಲಿಸುವಾಗು ಅಸ್ಟೆ ಅವರಿಗೆ ಕಲಿಯಲು ಬೇಕಾದ ಪುಸ್ತಕ,ಪಟ್ಟಿ , ಒಂದು ಕಾತ್ತೊನ್ ಟುವ್ವಾಲು  ,   ೫೦-೧೦೦ ರುಪಾಯೀ ಕೊಟ್ಟು ಕಳಿಸುತ್ತಿದ್ದರು.  ಮೊಮ್ಮಕ್ಕಳಲ್ಲಿ ಹಿರಿಯ ಮೊಮ್ಮಗ ಸಂದೀಪ ಕೆಲ್ಸಕ್ಕೆ ಬಲು ಚುರುಕು. ಆದ್ರೆ ಕಿರಿ ಮೊಮ್ಮಗ ಸ್ವಲ್ಪ ಆಳಸಿ . ಕಿರಿ ಮೊಮ್ಮಗ ವಿದ್ಯೆಯಲ್ಲಿ ಬಲು ಚುರುಕು.ಹಾಗಾಗಿ ಭಟ್ಟರಿಗೆ ಹೆಮ್ಮೆ ಪಡಲು ಇಬ್ಬರೂ ಮೊಮ್ಮಕ್ಕಳಲ್ಲಿ ಒಂದೊಂದು  ಕಲೆ ಅಡಗಿತ್ತು .ಕಿರಿ ಮೊಮ್ಮಗ ಪ್ರತಿಯೊಂದನ್ನು ಕುತೂಹುಲದಿಂದ ನೋಡುತ್ತಿದ್ದನು. ಪ್ರಶ್ನೆಗಳ ಸುರಿಮಳೆಯನ್ನೇ ಅಜ್ಜನಿಗೆ ಸುರಿಸುತ್ತಿದ್ದನು. ಒಮ್ಮೊಮೆ ಭಟ್ಟರು ಕೆಲಸದ ಭರದಲ್ಲಿ ಅವನ ಪ್ರಶ್ನೆ ತಡೆಯಲಾರದೆ ಗದರಿಸಿದ್ದು ಉಂಟು. ಹಾಗಿದ್ದರೂ  ಮೊಮ್ಮಕ್ಕಳಿಬ್ಬರನ್ನು  ಕಂಡ್ರೆ ಅಜ್ಜನಿಗೆ ಪ್ರಾಣಕ್ಕಿಂತ    ಪ್ರೀತಿ. ಒಮ್ಮೊಮ್ಮೆ  ಕಿರಿ ಮೊಮ್ಮಗನ ಪ್ರಶ್ನೆಗಳ ಕಿರಿಕ್ಕಿಗೆ ಭಟ್ಟರು ನಕ್ಕಿದ್ದು ಉಂಟು.ಒಂದಿನ ಸಂಜೆ ಭಟ್ಟರು "ಕೃಷಿ ಸಮಾಚಾರ " ಕೇಳುತ್ತಿದ್ದರು.ಕೃಷಿ ಸಮಾಚಾರ ಕೇಳುತ್ತ ಭಟ್ಟರು ಹಾಗೆ ಒಂದು ದಂ ಬೀಡಿ ಎಳೆದದ್ದನ್ನೆ ಮೇಲ್ಜಗುಲಿಯ ಕಪಾಟುಕಂಬದ ಬುಡದಲ್ಲಿ ಕುಳಿತು ನೋಡುತ್ತಿದ್ದ ಮೊಮ್ಮಗ ಕೃಷಿ  ಸಮಾಚಾರ ಮುಗಿಯುವದನ್ನೇ ಕಾಯುತ್ತಿದ್ದ.  ಕೃಷಿ ಸಮಾಚಾರ ಮುಗಿದು ಭಟ್ಟರು ರೇಡಿಯೋ ಸೌಂಡನ್ನು ಕಿರಿದಾಗಿಸಿದ ತಕ್ಷಣ ಮೊಮ್ಮಗ ಅಜ್ಜನೆಡೆಗೆ ಪ್ರಶ್ನೆ ಎಸೆಯುತ್ತಾನೆ " ಅಜ್ಜ ನೀ ದಿನಕ್ಕೆ ಎಷ್ಟು ಬೀಡಿ ಸೇದ್ಥೆ?" ಅದಕ್ಕೆ ಅಜ್ಜ " ಒಂದು ಕಟ್ಟು ಬೇಕಾಗ್ತು ದಿನಕ್ಕೆ ." ಎಂದು ಉತ್ತರಿಸುತ್ತಾನೆ. ತಕ್ಷಣ " ಒಂದು ಕಟ್ಟು ಬೀದಿಗೆ ಎಷ್ಟು ರುಪಾಯೀ?" ಎಂದು ಇನ್ನೊಂದು ಪ್ರಶ್ನೆ ಮೊಮ್ಮಗನಿಂದ ಭಟ್ಟರೆಡೆಗೆ ಹೊರಳುತ್ತದೆ. ಭಟ್ಟರು " ೧ ರುಪಾಯೀ ೨೦ ಪೈಸೆ " ಎಂದು ಉತ್ತರಿಸುತ್ತಾರೆ. "ಸರಿ" ಎಂದು ವಾಪಸ್ ಕಂಬದ ಬುಡದಲ್ಲಿ ಬಂದು ಕುಳಿತ ಮೊಮ್ಮಗ   ಎರಡು ಕೈ ಹಾಗು ಕಾಲು ಬೆರಳನ್ನು ಎಣಿಸಿ-ಗುಣಿಸಲು ಉಪಯೋಗಿಸಿ ಏನೋ ಭಾರಿ ಲೆಕ್ಕಾಚಾರ  ಹಾಕುವಂತೆ ಕಾಣಿಸುತ್ತಿರುತ್ತಾನೆ  . ೫ ನಿಮಿಷದ ನಂತರ  ಒಮ್ಮೆಲೇ ಎದ್ದ ಮೊಮ್ಮಗ ಅಜ್ಜನ ಕುರ್ಚಿ ಹತ್ತಿರ ಸಾಗಿ " ಅಜ್ಜ ದಿನಕ್ಕೆ ೧ ಕಟ್ಟು ಬೀಡಿಯಂತೆ ೧ ವರ್ಷಕ್ಕೆ ನಿಂಗೆ ಬೀಡಿ ಸೇದುಲೇ ೪೩೮ ರುಪಾಯೀ  ಬೇಕು !!!!!" ಅಂದ. ಮೊಮ್ಮಗನ ಲೆಕ್ಕಾಚಾರಕ್ಕೆ ಅಜ್ಜ ಬೆರಗಾಗಿ ನಗಲು ಶುರುಮಾಡುತ್ತಾನೆ. ಅಲ್ಲೇ ಪಕ್ಕದಲ್ಲೇ ಇದ್ದ ಅಳಿಯ ,ಸದಾಶಿವ , ಮಗನನ್ನು " ಹಂಗೆಲ್ಲ ಹೇಳುಲಾಗ ಕುತ್ಕ ಹೋಗಿ ಸುಮ್ಮಂಗೆ " ಅಂದಾಗ ಮೊಮ್ಮಗ ಮತ್ತೆ ಕಪಾಟುಕಂಬದ ಬುಡದಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ.ಇನ್ನೊಮ್ಮೆ  ಭಟ್ಟರು ಕಿರಿಮೊಮ್ಮಗನನ್ನು ಕರೆದುಕೊಂಡು ಹಲಸಿನ ಗಿಡ ನೆಡಲೆಂದು  ಕಂಪೌಂಡಿನ ಒಳಗಡೆಗೆ ಇರುವ   "ಕರಡುಬೆಣ " ಕ್ಕೆ  ( ಹುಲ್ಲುಗಾವಲಿಗೆ ) ಹೋಗುತ್ತಾರೆ. ಹೊಂಡ ತೋಡಿ ,ಹಲಸಿನ ಬೇಳೆಯನ್ನು ಮೇಲ್ಮುಖವಾಗಿ ಇಟ್ಟು ಮೊಮ್ಮಗನ ಹತ್ರ ಮಣ್ಣು ಹಾಕಲು ಹೇಳುತ್ತಾರೆ. ಯಾವಾಗಲು ಪ್ರಶ್ನೆ ಕೇಳುವ ಮೊಮ್ಮಗ, ಅಜ್ಜನಿಂದ ಮೂರ್ನಾಲ್ಕು ಬಾರಿ  ಬೈಸಿಕೊಂಡಿರುವ ಸನ್ನಿವೆಶವಿದ್ದರೂ,  ಮತ್ತೆ ಪ್ರಶ್ನೆ ಎಸಗುತ್ತಾನೆ. " ಅಜ್ಜ, ಇ ಹಲಸಿನ ಮರ ಯಾವಾಗ ಹಣ್ಣು ಕೊಡ್ತು?" ಅದಕ್ಕೆ ಭಟ್ಟರು " ನೀನು ಚೆನ್ನಾಗಿ ಕಲ್ತು ,ದೊಡ್ಡ ಆಫೀಸೆರಾಗಿ ಬರಕಾದ್ರೆ ಕೊಡ್ತು.ನಾ ನಿನ್ನ ಆಫೀಸಿಗೆ ಹಲಸಿನ ಹಣ್ಣು ತಂದು ಕೊಡ್ತೆ " ಅನ್ನುತ್ತಾರೆ. ವಿಧಿಯಾಟದ ಸುಳಿವಿಲ್ಲದ  ಅಜ್ಜ ಮೊಮ್ಮಗ ಇಬ್ಬರು ಅದೇ ನಿಜವಾಗಬಹುದೆಂದು ನಂಬಿ ಮನೆಯ ಕಡೆ ತೆರಳುತ್ತಾರೆ!!!!!!!!


                     ಭಟ್ಟರ ಮಗ ಜಗದೀಶನಿಗೆ ಮೋಟೊರ್ ಸಾಯ್ಕಲ್ಲಿನ ಹುಚ್ಚು.ಭಟ್ಟರ ಮನೆಗೆ ಬರುವಾಗೆಲ್ಲ ತನ್ನ ೧೯೬೫ ರ ಮೊಡೆಲಿನ  ಜಾವ ಗಾಡಿಗೆ ಸೀಮೆ ಎಣ್ಣೆ ಮಿಶ್ರಿತ ಪೆಟ್ರೋಲ್ ಹಾಕಿ ಓಡಿಸಿಕೊಂಡೆ ಬರುವದು. ದೂರದಲ್ಲೆಲ್ಲೋ ಭಯಂಕರವಾಗಿ ಆರ್ಭಟಿಸುತ್ತಿರುವ " ತೊಟ್ರೂಯ್ .....ತೊಟ್ರೂಯ್ " ಶಬ್ದ ಕೇಳಿದ ಕೂಡಲೇ ,ಬೆಟ್ಟದ ತಪ್ಪಲಿನ ಇಳಿಜಾರಿನಲ್ಲಿರುವ " ಮೂಲೆಮೆನೆಯ" "  ಗದ್ದೆಯಲ್ಲಿ ಕೆಲಸ ಮಾಡುವ ಆಳುಗಳು " ಅನಂತ ಭಟ್ರ ಮಗ ಬಂದ ಕಾಣ್ತು" ಎಂದು ಕಣ್ಣು ಕಿರಿದಾಗಿಸಿ ,ಹುಬ್ಬಿನ ಮೇಲೆ ಕಯ್ಯಿತ್ತು ಭಟ್ಟರ ಮನೆ ರಸ್ತೆ ಕಡೆ ನೋಡುತ್ತಿದ್ದರು. ಅಸ್ಟೆ ಅಲ್ಲದೆ ಬೈಕ್ ಓಡಿಸುವಲ್ಲಿ ಜಗದೀಶ ತೀರ ನಿಸ್ಸೀಮ .ಬೈಕ್ ಸ್ಕಿಡ್ ಆದರೆ ಬರಿಗಾಲಲ್ಲೇ ಕಾಲು ಕೊಟ್ಟಿ ಬೈಕ್ ನಿಲ್ಲಿಸುವಸ್ಟು ಶಕ್ತಿ ಜಗದೀಶನಲ್ಲಿತ್ತು.   ಮಗ ಜಗದೀಶ ಭರ್ಜರಿ ಅಜಾನುಬಾಹು. ಊರಿನ ಕಳ್ಳ/ಕಾಕರಿಗೆಲ್ಲ ಜಗದೀಶನ ಕಂಡ್ರೆ  ಬಹು ಭಯ. ಇ ಭಯಕ್ಕೆ ಕಾರಣವೂ ಇತ್ತು.ಭಟ್ಟರ  ಕಂಪೌಂಡಿಗೆ ಹೊಂದಿಕೊಂಡಂತೆ ಒಂದು " ಗ್ರಾಮಚಾವಡಿ" ಇತ್ತು. ಅದೊಂದು ಗೊವೆರ್ನಮೆಂಟ್ ಬಿಲ್ಡಿಂಗ್.ಅಲ್ಲಿ ಒಂದೆರಡು ಕೋಣೆಗಳು ಖಾಲಿ ಇದ್ದವು. ಊರಲ್ಲಿ ಅವಾಗಾವಾಗ ಅಡಿಕೆ,ತೆಂಗಿನಕಾಯಿ ಕಳ್ಳತನವಾಗುತ್ತಿದ್ದವು .ಹಾಗೆ ಕಳುವಾಗ ಸಿಕ್ಕಿಬಿದ್ದ ಕಳ್ಳರನ್ನೆಲ್ಲ ಭಟ್ಟರ ಮಗ ಜಗದೀಶ್ , ಆ ಕಾಲೀ ಕೋಣೆಯಲ್ಲಿ ಹಾಕಿ ಚೆನ್ನಾಗಿ ಬೆಳೆದ  ಸೀಸಂ ತೊಂಗೆಯನ್ನ್ನು  ಒಣಗಿಸಿ ಮಾಡಿದ ಕೋಲಿನಿಂದ ಬರೆ ಬರುವಂತೆ ಭಾರಿಸುತ್ತಿದ್ದ, ಊರಿನ ಕಳ್ಳರಿಗೆಲ್ಲ ಜಗದೀಶ್ ಸಿಂಹ ಸ್ವಪ್ನವಾಗಿದ್ದ.ಹಾಗಾಗಿ ಜಗದೀಶನ ಮೋಟೊರ್ ಬೈಕ್ ಶಬ್ಧವಾದರೆ ಸಾಕು ಮುಂದಿನ ೨-೩ ವಾರ ಯಾರೂ ತೋಟ ಕಾಯುವದೆ ಬೇಕಿರಲ್ಲಿಲ್ಲ!!!!!


                          ಹೀಗೆ ಸಾಗಿದ ಭಟ್ಟರ ಸುಖಜೀವನ ಕಂಡ ವಿಧಿಯ ಎದೆಯಲಿ ಅಸೂಯೆ  ಮನೆಯಾಡ ತೊಡಗಿತು.  ದುರ್ವಿಧಿ ತನ್ನ ಬಾಹುಗಳನ್ನು ಭಟ್ಟರ ಕುಟುಂಬದ ಕಡೆಗೆ ಚಾಚಿತ್ತು. ಜಗದೀಶನ " ಮಲೆನಾಡು ವುಡ್ ಇಂಡಸ್ಟ್ರಿ" ತುಂಬಾ ಚೆನ್ನಾಗಿ ಓಡುತ್ತಿತ್ತು .ಜಗದೀಶನ ಕಯ್ಯಲ್ಲಿ ಚೆನ್ನಗಿ  ದುಡ್ಡೂ  ಓಡಾಡುತ್ತಿತ್ತು .ಮೊದಲಿಂದಲೂ ಮೋಟೊರ್  ಸಾಯ್ಕಾಲ್ಲಿನ ಹುಚ್ಚಿದ್ದ ಜಗದೀಶನಿಗೆ ಆಗ ತಾನೆ ಹೀರೋ ಹೊಂಡ ಕಂಪನಿ ಬಿಡುಗಡೆ ಮಾಡಿದ ಸಿ.ಡಿ ೧೦೦ ಬೈಕ್ ಕೊಳ್ಳುವ ಆಸೆಯಾಗುತ್ತದೆ. ಹೀಗಾಗಿ ತನ್ನ ಆತ್ಮೀಯ ಗೆಳಯ ಉಮೇಶ್ ಶೆಟ್ಟರ ಜೊತೆಗೂಡಿ ಬೈಕ್ ಕೊಳ್ಳಲು ಮಂಗಳೂರಿನ ಶೋ ರೂಮಿಗೆ ಹೊರಡುತ್ತಾರೆ. ಕೆಂಪು ಬಣ್ಣದ  ಹೊಸ ಹೀರೋ ಹೊಂಡ ಗಾಡಿ ಖರೀದಿಸಿ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪೂಜೆ ಮಾಡಿಸಿಕೊಂಡು ವಾಪಸ್ ಗುಳ್ಳಾಪುರದ ಕಡೆ ಹೊರಡೋಣವೆಂದು ಇಬ್ಬರೂ ನಿರ್ಧರಿಸುತ್ತಾರೆ. ಮಾರನೆಯ ದಿನ ಬೆಳಗಿನ ಜಾವ ೪ ಗಂಟೆಗೆ ಎದ್ದು ಇಬ್ಬರೂ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಸ್ನಾನ ಮಾಡಿ ಹೊರಡುವಾಗ ಗೆಳಯ ಉಮೇಶ್ ಶೆಟ್ಟಿಗೆ ಬೈಕ್ ಓಡಿಸೋ ಹಂಬಲವಾಗುತ್ತದೆ.  ಜಗದೀಶ್ ಭಾರೀ ಅಜಾನುಭಾಹುವದರೆ,ಗೆಳಯ ನರಪೇತಲ .ಆದರೂ ಗೆಳೆಯನ ಆಸೆಗೆ ಜಗದೀಶ ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತು ಓಡಿಸಲು ಶೆಟ್ಟರಿಗೆ ಕೊಡುತ್ತಾನೆ. ಯಮರಾಜ ಅದೇ ದಾರಿಯಲ್ಲಿ ಅವರಿಗೋಸ್ಕರ ಕಾಯುತ್ತಿರುವ ಅರಿವಿಲ್ಲದ ಶೆಟ್ಟರು ಗಾಡಿ ಓಡಿಸುತ್ತಾರೆ. ಸ್ವಲ್ಪ ಹೊತ್ತಿನ ನಂತರ ಕಿರಿದಾದ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಧರ್ಮಸ್ಥಳ- ಬೆಳ್ತಂಗಡಿ  ಬಸ್ಸು ನೇರವಾಗಿ ಮುನ್ನುಗ್ಗಿ ಬಂದು ಇವರ ಮೋಟೊರ್ ಬೈಕನ್ನು ಗುದ್ದಿ ಸ್ವಲ್ಪ ಮುಂದೆ ಹೋಗಿ ನಿಲ್ಲುತ್ತದೆ. ಬಸ್ಸನು ನೋಡಿದ ಜಗದೀಶ ಕೊನೆಯ ಕ್ಷಣದಲ್ಲಿ ಬೈಕ್ ನ ಎಡಗಡೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ರಸ್ತೆ ಪಕ್ಕ ನೆಟ್ಟ ಕಿಲೋಮೀಟರು ಕಲ್ಲ್ಲಿನ ಮೊನಚಾದ ಅಂಚು ಜಗದೀಶನ ಕೆನ್ನೆ ಒಳತೂರಿ ಆಳವಾದ ಗಾಯ ಮಾಡುತ್ತದೆ.ಸ್ಥಳದಲ್ಲೇ  ಜಗದೀಶ್ ಕೊನೆಯುಸಿರೆಳಯುತ್ತಾನೆ. ಶೆಟ್ಟರನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ೩-೪ ಬೆರಳನ್ನು ಕಳೆದುಕೊಂಡು,ತೀವ್ರ ರಕ್ತಸ್ರಾವದ ನಡುಯೆಯು ಬದುಕಲು  ೬-೮ ತಿಂಗಳ ಕಾಲ್ ಹೋರಾಡಿದ ಶೆಟ್ಟರು ಕೊನೆಗೂ ಯಮರಾಜನ ವಿರುದ್ದ ಗೆಲ್ಲುತ್ತಾರೆ. ಆದರೆ ತಮ್ಮ ಪ್ರಾಣದ ಗೆಳೆಯ ಜಗದೀಶನ ಮರಣದ ಸುದ್ದಿ ಶೆಟ್ಟರನ್ನು ಬದುಕಿದ್ದು ಸತ್ತಂತೆ ಮಾಡುತ್ತದೆ.
                                 
                        ಜಗದೀಶನ ಆಕ್ಸಿಡೆಂಟ್ ವಿಚಾರ ಭಟ್ಟರ ಕಿವಿ ತಲುಪಿದ್ದೆ ಭಟ್ಟರಿಗೆ ಬರಸಿಡಿಲು ಬದಿದಂಥಾಗುತ್ತದೆ. ನಿಂತ ಜಾಗದಲ್ಲೇ ಮೂರ್ಚೆ ಹೋದ ಭಟ್ಟರ ಹೆಂಡತಿಯನ್ನು ಹೆಣ್ಣಾಳುಗಳು   ಆರೈಕೆ ಮಾಡಿ ನೀರು ಕುಡಿಸುತ್ತಾರೆ. ತಕ್ಷಣ ಭಟ್ಟರು ಅಳಿಯನ್ದಿರಿಬ್ಬರಿಗೂ ವಿಷಯ ತಿಳಿಸಿ ಮಂಗಳೂರಿಗೆ ಹೊರಡಲು ತಯಾರಾಗುತ್ತಾರೆ. ೮ ಕಿ.ಮಿ ತಮ್ಮ ಹಳೆಯ ಸಾಯ್ಕಲ್ಲು ಕಷ್ಟ   ಪಟ್ಟು ತುಳಿದು ಬಂದ ವಯಸ್ಸಾದ ಆ ಮುದಿ   ಜೀವ ಮಗನೆ ಪ್ರಾಣ ರಕ್ಷಣೆಗೆ ನೂರಾರು ದೇವರ ಮೊರೆ ಹೋಗುತ್ತದೆ. ಆದರೆ ಹೊಳೆ ದಾಟಿ ರಾಮಾನಗುಳಿ ತಲುಪಿದ ಭಟ್ಟರನ್ನು ,ವಿಷಯ ತಿಳಿದ ಭಟ್ಟರ ಆಪ್ತ್ಹರು ಮುಂದೆ ಹೋಗದಂತೆ ತಡೆದು "ಜಗದೀಶನಿಗೆ ಏನೂ ಆಗಿಲ್ಲ.ಅಲ್ಲಿಗೆ ಹೋಗುವ   ಅವಶ್ಯಕತೆಯಿಲ್ಲ .ಜಗದೀಶನಿಗೆ ಏನೂ ಆಗಿಲ್ಲ .ಇನ್ನು ಸ್ವಲ್ಪ ಹೊತ್ತಿನಲ್ಲಿ ಅವರೇ ಇಲ್ಲಿಗೆ ಬರುತ್ತಾರೆ ".ಎಂದು ಸುಳ್ಳು ಹೇಳಿ ಸಮಾಧಾನ ಪಡಿಸುತ್ತಾರೆ. ಅಷ್ಟರಲ್ಲಿ ಭಟ್ಟರ ಮಕ್ಕಳೂ,ಮೊಮಕ್ಕಳೂ, ಅಳಿಯನ್ದಿರೆಲ್ಲರೂ ರಾಮನಗುಳಿಗೆ ಬಂದು ಸೇರುತ್ತಾರೆ.ಊರಿನ ಜನರೆಲ್ಲಾ ಸೇರಿ ಎಲ್ಲರನ್ನು ಮನೆಗೆ ವಾಪಸ್ಸು ಕರೆತರುತ್ತಾರೆ. 


                       ರಾತ್ರಿಯಿಡೀ ಕಣ್ನೀರಲ್ಲೇ ಕಳೆದ  ಭಟ್ಟರ ಕುಟುಂಬಕ್ಕೆ ವಾಸ್ಥವೀಕಥೆಯ ಸೂಚನೆಯಾಗುತ್ತದೆ. ಮಾರನೆ ದಿನ ಸುಮಾರು ೧೦.೦೦  ಗಂಟೆ ಹೊತ್ತಿಗೆ ಬಿಳೀ ಬಟ್ಟೆಯಲಿ  ಸುತ್ತಿದ ಜಗದೀಶನ ಶರೀರ ಭಟ್ಟರ ಅಂಗಳದಲ್ಲಿ ಬಂದಿಳಿಯುತ್ತದೆ. ಪುತ್ರಶೋಕದ ಬಾಧೆಯಿಂದ ಭಟ್ಟರು ಜರ್ಜರಿಥರಾಗುತ್ತಾರೆ . ಭಟ್ಟರ ಹೆಂಡಥಿಯನ್ತು ೧೦ ನಿಮಿಷದ  ಅಳುವಿನ  ನಂತರ ಮತ್ತೆ ಅರ್ಧ ಗಂಟೆ   ಮೂರ್ಚೆ ಹೋಗುತ್ತಾರೆ.ಮನೆಯ ಇನ್ನೊಂದು ಮೂಲೆಯಲ್ಲಿ  ಭಟ್ಟರ ಹೆಣ್ಣು ಮಕ್ಕಳಿಬ್ಬರೂ ಪ್ರೀತಿಯ ಅಣ್ಣಯ್ಯನ ಕಳೆದುಕೊಂಡ ದುಃಖದಲ್ಲಿ ಮುಳುಗಿರುತ್ತಾರೆ. ನಡೆದ ಘಟನೆ  ಸಂಪೂರ್ಣವಾಗಿ ಅರ್ಥವಾಗದಿದ್ದರೂ ಅಪ್ಪ/ಅಮ್ಮ ಅಳುವದನ್ನು ನೋಡಿ ಮೊಮ್ಮಕ್ಕಳಿಬ್ಬರು ಅಳಲು ಶುರು ಮಾಡುತ್ತಾರೆ. ಕೆಲವೇ ದಿನಗಳ ಹಿಂದೆ ರಾಜರ ಅರಮನೆಯಂತಿದ್ದ ಭಟ್ಟರ ಮನೆಯಲ್ಲಿ  ಶ್ಮಶಾನ ಮೌನ ಅವತರಿಸುತ್ತದೆ.  ಮಾವನ ಶರೀರದಿಂದ ೨೫ ವರ್ಷಗಳ ಹಿಂದೆ ಹೊರಟ ಆ ನೀಲಗಿರಿ ಎಣ್ಣೆಯ ವಾಸನೆ ಭಟ್ಟರ ಕಿರಿ  ಮೊಮ್ಮಗನಿಗೆ ಇನ್ನೂ ನೆನಪಿದೆ!!!.

                        ಕೆಲದಿನಗಳ ಉಪಚಾರ ಮಾತುಕತೆಯ ನಂತರ ನೆಂಟರೆಲ್ಲ ಭಟ್ಟರ ಕುಟುಂಬಕ್ಕೆ ಸಮಾಧಾನ ಹೇಳಿ ತಮ್ಮ ಮನೆ ಕಡೆ ತೆರಳುತ್ತಾರೆ. ಮಗನನ್ನು ಕಳೆದುಕೊಂಡ ಭಟ್ಟರ ಜೀವನ ನೀರಸವಾಗಿ ಸಾಗುತ್ತಿರುತ್ತ್ತದೆ.ಭಟ್ಟರ ಹೆಣ್ಣು ಮಕ್ಕಳಿಬ್ಬರು ಆಗಾಗ ಬಂದು ಭಟ್ಟರ ಆರೈಕೆ ನೋಡಿ ಹೋಗುತ್ತಿರುತ್ತಾರೆ.ಹೀಗೆ ಸಾಗಿದ ಭಟ್ಟರ ಜೀವನದಲ್ಲಿ ವಿಧಿ ಮತ್ತೆ ಆಟವಾಡಲು ಶುರುಮಾಡುತ್ತದೆ. ಭಟ್ಟರಿಗೆ ಬಂದ ಜಮೀನು ಭಟ್ಟರ ಹೆಂಡತಿ ಕಡೆಯದಾಗಿರುತ್ತದೆ. ಭಟ್ಟರ ಹೆಂಡತಿ ಹುಟ್ಟಿದ ಕೆಲವೇ ದಿನಗಳಲ್ಲಿ ಅಪ್ಪ ಅಮ್ಮನನು ಕಳೆದುಕೊಂಡು ಅನಾಥಲಾಗಿರುತ್ತಾಳೆ .ಆದರೆ ಮಕ್ಕಳಿಲ್ಲದ ದಂಪತಿಗಳಿಬ್ಬರು ಈ ಮಗುವನ್ನು ದತ್ತು ತೆಗೆದುಕೊಂಡು ಭಟ್ಟರಿಗೆ  ಕೊಟ್ಟು ಮದುವೆ ಮಾಡಿರುತ್ತಾರೆ. ಜಗದೀಶನ ಮರಣದ ನಂತರ ಭಟ್ಟರ ಹೆಂಡತಿಯ ಸಾಕು ತಾಯಿಯ ಅಣ್ಣನ ಮಗನಿಗೆ ಭಟ್ಟರ ಜಮೀನನ್ನು ವಶಪಡಿಸಿಕೊಳ್ಳುವ ದುರಾಸೆ ಹುಟ್ಟುತ್ತದೆ. ಇದಕೆ ಸಾಲದೆಂಬಂತೆ ಭಟ್ಟರೇ ಕೊಟ್ಟ ಜಮೀನೊಂದರ ಯಜಮಾನನು ಭಟ್ಟರ ಜಮೀನು ಕಬಳಿಸಲು ಅವನ ಜೊತೆಗೂಡುತ್ತಾನೆ. ಕೋರ್ಟ್ ಮೆಟ್ಟಿಲೇರಿದ ಜಮೀನಿನ ವ್ಯಾಜ್ಯ ವರ್ಷಾನುಗಟ್ಟಲೆ ಸಾಗುತ್ತದೆ. ಮೊದಲೇ ಪುತ್ರಶೋಕದಿಂದ  ಜರ್ಜರಿಥರಾದ ಭಟ್ಟರಿಗೆ ಇ  ಬಾಧೆ ಇನ್ನೂ ಹತಾಷೆಗೊಲಿಸುತ್ತದೆ. ಇ ಸಂಧರ್ಭದಲ್ಲಿ ಭಟ್ಟರ  ಬೆನ್ನೆಲುಬಾಗಿ ನಿಲ್ಲುವವನು ಭಟ್ಟರ ಹಿರಿ ಅಳಿಯ  ಕುಮಟದ ಸದಾಶಿವ ಜೋಷಿ .ಸದಾಶಿವ ಕಾನೂನು ವ್ಯವಹಾರದಲ್ಲಿ ತುಂಬಾ ನಿಸ್ಸೀಮ.ಅಲ್ಲದೆ ಶೇಂಗ ವ್ಯಾಪಾರದ ಸಲುವಾಗಿ ಹತ್ತಾರು ಕಡೆ ಓಡಾಡಿ  ಒಂದಿಷ್ಟು ರಾಜಕೀಯ ವ್ಯಕ್ತಿಗಳು, ಪೋಲೀಸರ ಜೊತೆ ಒಳ್ಳೆಯ ಸಂಭಂದವನ್ನು ಹೊಂದಿದ್ದ.ಇ ಮಧ್ಯೆ ಕೋರ್ಟು ಕೆಲಸದ ಸಲುವಾಗಿ ಸದಾಶಿವನ ಹೆಚ್ಚಿನ ಸಮಯವನ್ನು ಭಟ್ಟರ ಜೊತೆಯಲ್ಲೇ ಕಳೆಯಬೇಕಾಗುತ್ತದೆ. ಸದಾಶಿವನ ಬೆಂಬಲ ಭಟ್ಟರಲ್ಲಿ ಹೊಸ ಆತ್ಮ ವಿಶ್ವಾಸ ಮೂಡಿಸುತ್ತದೆ. ಹೀಗೆ ಮುಂದಿನ ೩-೪  ವರ್ಷ ಜೀವನ ಸಾಗುತ್ತದೆ. 

                       ಇ ಮದ್ಯ್ಹೆ ಜಮೀನಿನ ವ್ಯಾಜ್ಯ ತೀವ್ರ ಸ್ವರೂಪ ತಾಳುತ್ತದೆ. ಭಟ್ಟರ ಜಮೀನಿನಲ್ಲಿ ವಾಸಮಾಡಿದ ಸೂರ ಗಾವ್ನ್ಕಾರ ಭಟ್ಟರ ಜೊತೆ ವಿಪರೀತ ವೈಮನಸ್ಯ ಬೆಳೆಸಿಕೊಂದಿರುತ್ತಾನೆ. ಸಮಯ ಸಿಕ್ಕರೆ ಭಟ್ಟರಿಗೆ ಹೊಡೆವೇನು,    ಬಡಿವೆನು ಎಂದು ಬೆದರಿಕೆ ಹಾಕುತ್ತಿರುತ್ತಾನೆ  .ಆದರೆ ಆ ಬೆದರಿಕೆಗೆ ಜಗ್ಗದ ಭಟ್ಟರು ತಮ್ಮ ಪಾಡಿಗೆ ತಾವು ಕೆಲಸ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಹೀಗಿರಲು ಒಮ್ಮೆ ಸೂರ ಗಾವ್ನ್ಕರನ ತಲೆಯಲ್ಲಿ ಪೈಶಾಚಿಕ ಅಲ್ಲೋಚನೆಯೊಂದು ಹೊಳೆಯುತ್ತದೆ. ಒಂದು ದಿನ ಭಟ್ಟರು  ಯಾವದೋ ಕೆಲಸದ ನಿಮಿತ್ತ ಅಂಕೋಲೆಗೆ ತೆರಳಿರುತ್ತಾರೆ. ಇದೆ ಸಮಯ ನೋಡಿದ ಸೂರ ಗವ್ಕಾರ ೧೦-೧೨  ಬಾಡಿಗೆ ರೌಡಿಗಳ ಜೊತೆಗೂಡಿ ಒಂದು ಟೆಂಪೋ ಏರಿ ಭಟ್ಟರ ಮನೆಗೆ ನುಗ್ಗುತ್ತಾನೆ. ಒಂದು ಕಾಲು ಸರಿ ಇಲ್ಲದ ಒಬ್ಬಂಟಿ ಹೆಂಗಸು ಭಟ್ಟರ ಹೆಂಡತಿಯ ಮೇಲೆ ,ಗಂಡಸತ್ವವಿಲ್ಲದ ಶಿಖಂಡಿ ಸೂರ ಗಾವ್ನ್ಕಾರ ದಾಳಿ ಮಾಡುತ್ತಾನೆ. ಉದ್ದನೆಯ  ಕೋಲಿನಿಂದ ಭಟ್ಟರ  ಹೆಂಡತಿಯನ್ನು ಥಳಿಸಿ ಮೂರ್ಚೆ ಹೋಗುವಂತೆ ಹೊಡೆದು ಮನೆಯಲ್ಲಿದ್ದ ಅಡಿಕೆ,ತೆಂಗು ಬೆಳೆಗಳನ್ನು ತಂದಿದ್ದ ಟೆಂಪೋದಲ್ಲಿ ತುಂಬಿ ಪರಾರಿಯಾಗುತ್ತಾನೆ. ಅಂಕೊಲೆಯಿಂದ ವಾಪಾಸ್ ಬಂದ ಭಟ್ಟರಿಗೆ ಈ ಸುದ್ದಿ ತೆಳಿಯುತ್ತದೆ.  ತಕ್ಷಣ ತಮ್ಮ ಅಳಿಯ ಸದಾಶಿವನಿಗೆ ಫೋನಿನ ಮೂಲಕ ವಿಷಯ ತಿಳಿಸಿದ ಭಟ್ಟರು ಮನೆ ಕಡೆ ಬಂದು ಹೆಂಡತಿಯನ್ನು ಆಸ್ಪತ್ರೆಗೆ   ಸೇರಿಸುತ್ತಾರೆ. ತಕ್ಷಣ ಬಂದಿಳಿದ ಸದಾಶಿವ ಶೀಗ್ರ ಕಾರ್ಯಪ್ರವರ್ಥನಾಗಿ ಅಂಕೋಲೆಗೆ ತೆರಳಿ ಪೋಲಿಸ್ ಕಂಪ್ಲೈಂಟ್ ಒಂದನ್ನು ಕೊಡುತ್ತಾನೆ. ತನ್ನೆಲ್ಲ ರಾಜಕೀಯ ವ್ಯಕ್ತಿ, ಪೋಲಿಸ್ ಕಾಂಟಾಕ್ಟ್ ಮೂಲಕ ಸೂರಗವ್ನ್ಕಾರ ಅಡಗಿ ಕುಳಿತಲ್ಲಿಂದ ನಾಯಿಯಂತೆ ಎಳೆತಂದು ಜೈಲಿಗೆ ಹಾಕಿಸುವಲ್ಲಿ ಸದಾಶಿವ ಯಶಸ್ವಿಯಾಗುತ್ತಾನೆ. ಜೈಲಿನಿಂದ ಹೊರಬರಲು ಸೂರಗವ್ನ್ಕಾರ ಹರಸಾಹಸ ಪಡುತ್ತಾನೆ. " ಇ ಕುಮಟ ಜೋಇಶಿಯ ಸಹವಾಸವೇ ಬೇಡ " ಎಂದು ಊರೆಲ್ಲ ಹೇಳಿ ತಿರುಗುತ್ತಾನೆ. ದುಡ್ಡಿನಿಂದ ನ್ಯಾಯ ಕೊಳುವ ಭಾರತ ದೇಶದ ಸುಲಭ ವಿಧಾನ ಸೂರಗವ್ನ್ಕರನನ್ನು ಜೈಲಿನಿಂದ ಆಚೆ ತರವುಲ್ಲಿ ಯಶಸ್ವಿಯಾಗುತ್ತದೆ, ಇಷ್ಟೂ ಸಾಲದೆಂಬಂತೆ ದಿನಕಳದಂತೆ ಸೂರಗವ್ನ್ಕರ ನಿರಪರಾಧಿ ಎಂಬ ಆತನ ಪರ ವಕೀಲರ ವಾಧ ಗಟ್ಟಿಯಾಗುತ್ತಾ ಸಾಗುತ್ತದೆ. ಒಂದು ದಿನ ಘನತೆವೆತ್ತ ನ್ಯಾಯಾಧೀಶರು ಗವ್ನ್ಕಾರನ ಪರ ವಕೀಲನ  ಸುಳ್ಳು ಪುರಾವೆಗಳಿಂದ ಮೋಸ ಹೋಗಿ ,ಗಾವ್ಕಾರನನ್ನು ನಿರಪರಾಧಿ ಎಂದು ಘೋಷಿಸುತ್ತಾರೆ .!!!. ವಿಧಿ ಇಲ್ಲಿಯೂ ಕೂಡ ಅನಂತ  ಭಟ್ಟರಿಗೆ ಕೈ  ಕೊಡುತ್ತದೆ!!!


              ಇಸ್ಟೆಲ್ಲಾ ನೋಡಿದ ಭಟ್ಟರಿಗೆ ಜೀವನದ ಆಸೆಯೇ ಕಮರಿ ಹೋಗಲಾರಂಭಿಸುತ್ತದೆ. ಇಶ್ವರನ ಪರಮ ಭಕ್ತರಾದ ಭಟ್ಟರೆಡೆಗೆ ಕೊನೆವರೆಗೂ  ಇಶ್ವರನ ಕೃಪೆಯೇ ಬೀರಲಿಲ್ಲ. ಜೀವನದಲ್ಲೇ ಯಾವತ್ತೂ ಯಾರಿಗೂ ಅನ್ಯಾಯ ಮಾಡದೆ ,ಪರರಿಗೆ ತನ್ನ ಕೈಲಾದಸ್ಟು ಸಹಾಯ ಮಾಡುತ್ತಾ ,ಸದಾ ಎಲ್ಲರ ಜೊತೆಯೂ ಪ್ರೀತಿಯಿಂದ ಬದುಕಿದ ದಿವ್ಯ ಚೇತನವೊಂದು ಈ ದಿನ  ಅನ್ನ್ಯಾಯದ ದವಡೆಗೆ  ಸಿಕ್ಕು ಒದ್ದಾಡುತ್ತಿತ್ತು .ಇಸ್ತಾದರೂ   ಭಗವಂತನಿಗೆ ಭಟ್ಟರ ಮೇಲೆ ದಯೆಯಿರಲಿಲ್ಲ. ತಾನೆಸ್ಟು  ಕ್ರೂರಿಯಾಗಬಲ್ಲೆ ಎಂಬುದನ್ನು ಇನ್ನೂ ತೋರಿಸುವ ನಿಟ್ಟಿನಲ್ಲೇ ಭಗವಂತ ಕೆಲಸ ಮಾಡುತ್ತಿದ್ದ. ಆ ದಿನ  ಎಂದಿನಂತೆ  ಮೊದಲ ರೌಂಡ್ ತೋಟದ ಕೆಲಸ ಮುಗಿಸಿ ಬಂದ ಭಟ್ಟರು ಕೆಳಜಗುಲಿಯ ಆರಾಮ ಕುರ್ಚಿಮೇಲೆ ಕುಳಿತಿದ್ದರು. ಭಟ್ಟರ ಹೆಂಡತಿ  ಭಟ್ಟರಿಗೆ ಟಿ ಮಾಡಲು ಅಡುಗೆ ಮನೆಗೆ ಹೋಗಿದ್ದರು. ಅಲ್ಲೇ ಜಗುಲಿಯ ಅಂಚಿನಲ್ಲಿ ಕವಳಕ್ಕೆ ಅಡಿಕೆ ಕೆತ್ತುತ್ತ  ಭಟ್ಟರ ಅಳಿಯ ಸದಾಶಿವ ನಿಂತಿದ್ದ.ಅಡುಗೆ ಮನೆಯಿಂದ ಭಟ್ಟರಿಗೆಂದೇ ಮೀಸಲಾಗಿಟ್ಟಿದ್ದ ಕಪ್ಪು-ಬಶಿಯಲ್ಲಿ ಟಿ ಹಾಕಿಕೊಂಡು ಭಟ್ಟರ ಹೆಂಡತಿ ಹೊರಬಂದಳು.ಭಟ್ಟರ ಕೈಗೆ ಕಪ್ಪು-ಬಶೀ ಕೊಟ್ಟು " ಸದಾಶಿವ, ಚಾ ಮಾಡಿದ್ದೆ ಬಾರೋ " ಎಂದು ಅಳಿಯನನ್ನು ಕೂಗಿದ್ದರು. ಅಸ್ಟರಲ್ಲಿ ಆರಾಮು ಕುರ್ಚಿಯಲ್ಲಿ ಕುಳಿತಿದ್ದ ಭಟ್ಟರು ವಿಚಿತ್ರವಾಗಿ ನರಳಲಾರಂಭಿಸಿದರು. ಭಟ್ಟರ ಕೈ ನಡುಗಿ ಬಲಗಯ್ಯಲ್ಲಿದ್ದ ಬಹುಕಾಲದಿಂದ ಉಪಯೋಗಿಸುತ್ತಿದ್ದ ಭಟ್ಟರು ಟಿ ಕುಡಿಯುವ ಬಶೀ ಜಾರಿ ಬಿದ್ದು ಚೂರಾಯಿತು. ಚಿಟ್ಟೆ ಮೇಲಿದ್ದ ಸದಾಶಿವ ಹೌಹಾರಿ ಓಡಿ ಬರುವವರೆಗೆ ಭಟ್ಟರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ೫ ವರ್ಷದ ಅಂತರದಲ್ಲೇ ಎರಡನೇ ಆಘಾತಕ್ಕೊಳಗಾದ ಭಟ್ಟರ  ಹೆಂಡತಿ ಗರಬಡಿದಂತೆ ನಿಂತಿದ್ದರು. ಬಹುಷಃ ಅಳಲು ಕಣ್ಣಿರೂ ಸಹ ಬಾಕಿ ಉಳಿದಿಲ್ಲವಾಗಿತ್ತೇನೋ ಆ ಮುದಿ ಜೀವದ ಬಳಿ!!!

                         ಭಟ್ಟರ ನಂತರ ಆ ಸುಂದರ ೬ ಅಂಕಣದ ಮನೆಯ ಛಾಯೆಯೇ ಬದಲಾಯ್ತು. ಭಟ್ಟರ ಮರಣದ ನಂತರ ಅಲ್ಲಿರಲು ಭಯಸದ ಭಟ್ಟರ ಹೆಂಡತಿ ಎಲ್ಲ ಜಮೀನನು ಬಂದಸ್ಟಕ್ಕೆ ಮಾರಿ ಮಕ್ಕಳ ಮನೆಗೆ ತೆರಳಿದರು. ಅಲ್ಲಿಗೆ  ಒಂದು ಭವ್ಯ ಭಾರೀ ಕುಟುಂಬದ ಸುಂದರ ಕಥೆ ದುಖ್ಹಾನಥದಲ್ಲಿ ಮುಗಿದಿತ್ತು.ಪಾಪಿ ಚಿರಾಯು ಎನ್ನುವಂತೆ ಸೂರಗವ್ನ್ಕರ  ಎಲ್ಲ ಜಮೀನನು ಕಬಳಿಸಿಕೊಂಡು ಸುಖವಾಗಿದ್ದ. ಜೀವನ ಪೂರ್ತಿ ತಪ್ಪದೆ ಈಶ್ವರ ನ ಪೂಜೆ ಮಾಡಿಕೊಂಡು ಬಂದ ಭಟ್ಟರು  ಈಶ್ವರ ನ ಪಾದ ಸೇರಿದ್ದರು. !!!!!
                          ಇಂದು ಸುಮಾರು ೨೫ ವರ್ಷದ ನಂತರ  ಒಂದುವೇಳೆ ದೇವರು ನನ್ನ ಹತ್ತಿರ ಬಂದು ಏನಾದರೂ ಕೇಳು ಎಂದರೆ ನಾನು ಕೇಳುವದು ಇಸ್ಟೇ " ನನ್ನ ಅಜ್ಜನ ಜೊತೆ ನಾನೂ ಇಗ  ಒಂದು ದಿನ ಕಳೆಯಬೇಕು .ನಾನು ಅವನಿಗೊಂದು ಪ್ರಶ್ನೆ ಕೇಳಬೇಕು "ನಾವು ಆ ದಿನ ಕರಡುಬೆಣ ದಲ್ಲಿ ನೆಟ್ಟ ಹಲಸಿನ ಮರ ಇಗ ಹಣ್ಣು ಕೊದಲಾರಮ್ಭಿಸಿದೆಯ ?" ಎಂದು!!!!!


  So thats why I wish i could revesre the time to go back  by 25 years!!..i wanna be the same kid to my grandpa and i wanna ask the same questions...............All i can say is......I wish ..I could!!!!!!





Copy write protected...