ನಮ್ಮನೆ ...ವೊಂಥರ ಡೆಡ್ಲಿ ಮನೆ.ಇಲ್ಲಿ ಇದ್ದವು ಆರು ಜನ. ನಾನು- ಕುಳ್ಳಿ , ಅಣ್ಣಬಟ್ಟ-ವಾಲೆಪಟಾಕಿ, ಅಪ್ಪ - ಶಿಂಗ್ರಿ.
ಹೇಳ ಅಂದ್ರೆ ಎಲ್ಲರು ಒಂಥರಾ ಹುಚ್ರು. ಸುಮ್ನೆ ಹಿಂಗೆ ನಮ್ಮನೇಲಿ ಆದ ಎಲ್ಲ ಸಣ್ಣ ಪುಟ್ಟ incidents summary ಇಲ್ಲಿದ್ದು :
೧) ನಂಗ ಎಲ್ಲ ಒಂದ್ಸಲ ಕೊಡಗು ಟ್ರಿಪ್ಗೆ ಹೋಗಿದ್ದ .ಅಲ್ಲಿ ವೊಂದು "ವನ್ಯಧಾಮ" ಇತ್ತು. ಅಲ್ಲಿಗೆ ಹೋದಾಗ ನಂಗ ಎಲ್ಲ interesting ಇಂದ ಪ್ರಾಣಿ ನೋಡ್ತಾ ಇದ್ದರೆ , ಅಪ್ಪ ಮಾತ್ರ separate ಆಗಿ ಎಂತದೋ ಹುಡ್ಕ್ತಾ ಇದ್ದಿದ.ಅಪ್ಪ ಎಂಥ ಮಾಡ್ತಿದ್ಯ ಹೇಳಿ ನಾನು ಕೇಳ್ಧೆ.ಅದ್ಕೆ ಅಪ್ಪ " ವೊಂಚುರು ತಂಬಾಕಿನ ತುಂಡು ಕೈಯಲ್ಲಿ ಇಟ್ಕಂಜೆ . ಯಾವ್ದಾದ್ರೂ ಮಂಗ ಕಂಡ್ರೆ ಮಂಗಗ್ ತಂಬಾಕು ತಿನ್ಸಿ ನೋಡ ಹೇಳಿ ಕಾಯ್ತಾ ಇದ್ದೆ " ಅಂದ !!!!!!!..
೨) ಅಮ್ಮನ famous dilouge " ನಿಮ್ ಕಾಟ ತಡಿಲಾಗ್ಧೆ ನಾನು ಬಣ್ಣ ಬಣ್ಣದ್ದು ತರಕಾತು ಹೇಳಿ "
( ಕಡ್ಡಾಯವಾಗಿ ಮನೆ ಮಂದಿಗೆ ಮಾತ್ರ!!)
೩) ನಾನು ಆವಾಗ US ಅಲ್ಲಿದ್ದೆ. ನಂಗೆ-ರಶ್ಮಿಗೆ engagement ಆಗಿತ್ತು .So , ಒಂದಿನ ಹೆಂಡತಿ ಎಂತದೋ romantic message ಮಾಡಿತ್ತು. ಅಸ್ಟೊತ್ತಿಗೆ ಸರ್ಯಾಗಿ ಅಪ್ಪನೂ ಬ್ಯಾಂಕ್ ಅಕೌಂಟ್ ಬಗ್ಗೆ ಎಂತದೋ ಮೆಸೇಜ್ ಮಾಡಿದ್ದ.ನಾನು ನನ್ನ romantic reply ನ ಅಪ್ಪಂಗೆ ಮಾಡಿದ್ದೆ!!!!!!!!....ಅಪ್ಪಂಗೆ ಅದ್ನ ನೋಡ್ಕಂಡಿ ತಲೆ ಕೆಟ್ಟುಹೋಜು !!..ಅದ್ಕೆ ಬೇರೆ ಅಣ್ಣಯ್ಯನ dilouge " ಅಪ್ಪ ಮೆಸೇಜ್ ಪೂರ ಓದಿದ್ನಿಲ್ಯ.ಪೂರ ಓದಿದರೆ ೨ ಸಲ ಮಿನ್ದ್ಕ ಬರಕಾಗಿತ್ತು ಹೇಳಿ!!..ನಾನು ಬಾಯಿ ಮುಚ್ಕಂಡೆ ಇದ್ದಿದ್ದೆ.!!!!
೪) ನಾನು-ರಶ್ಮಿ 1st floor ರೋಮಲ್ಲಿ ಮಲ್ಗುದು .ಒಂದಿನ ನಾನು late ಆಗಿ ೯ ಗಂಟೆಗೆ ಎದ್ದು ಬಂದೆ.ಅಪ್ಪ " ಇಗ ಬೆಳ್ಗಾತನ ಮಗ? " ಕೇಳದ.ನಾನು ಸುಮ್ನೆ ಇದ್ದಿದ್ರೆ ಚೊಲೋ ಆಗಿತ್ತು.Stunt ಮಾಡ್ತಾ ನಾನು " ಅಪ್ಪ ನಾನು ನಿದ್ದೆ ಮಾಡ್ತಾ ಇಲ್ಲೇ ಆಗಿತ್ತು.ಮೇಲ್ಗಡೆ ಪ್ರಾಣಾಯಾಮ ಮಾಡ್ತಾ ಇದ್ದಿದ್ದೆ ಅಂದೇ .ಅಪ್ಪ " ಓಹೋ ಪ್ರಾಣಾಯಾಮ ನ ? ಓಕೆ..ಓಕೆ .ರಶ್ಮಿ,ಬಾ ಇಲ್ಲಿ. ಅವ್ನ ಕುತ್ಗೆ ಮೇಲೆ ನಿನ್ ಟಿಕ್ಲಿ( ಬಿಂದಿ) ಹಂಗೆ ಇದ್ದು ಬಗೆಲ್ ತೇಗಿ ಅದ್ನ ,ಇಲ್ದೆ ಹೋದ್ರೆ ಅವ ಹಂಗೆ ಆಫೀಸಿಗೆ ಹೋಗ್ತಾ " ಅಂದ . ನಾನು ,ರಶ್ಮಿ ಇಬ್ರು ಗಪಚಿಪ್!!!!!!!
೫) ಒಂದಿನ ಅತ್ಗೆ ನನ್ನ B'day ಗೆ suprise ಕೊಡ ಹೇಳಿ ಎಂತದೋ gift ತಂದಿ ಇಟ್ಟಿತ್ತು.ರಾತ್ರೆ ೧೨ ಗಂಟೆಗೆ ನನ್ನ ಎಬ್ಸಿ , cake cut ಮಾಡ್ಸಿ , gift ಕೊಡವು ಹೇಳಿ ಅತ್ಗೆ plan .ಅಣ್ಣಯ್ಯ ಪಾಪ as usual ೮ ಗಂಟೆಗೆ ಮನೆಗ್ ಬಂದವು dress change ಮಾಡುಲೆ ರೂಮ್ಗೆ ಹೋದವ ನನ್ನ ಕರ್ಕಂಡಿ " ಸಚ್ಚಿ , ಅತ್ಗೆ ನಿಂಗೆ surprise ಕೊಡವು ಹೇಳಿ ನಿಂಗೆ ಗೊತ್ತಿಲ್ದೆ gift ತಂದಿ ಇಟ್ಟಿದ್ದು " ಅಂದ.ಅಷ್ಟ್ರಲ್ಲಿ ಅತ್ಗೆ ಅಡ್ಗೆ ಮನೆಯಿಂದ ಅದ್ನ ಕೆಲ್ಸ್ಕಂಡು hall ಗೆ ಬಂತು..ಅಣ್ಣಯ್ಯನ ಮುಖಾನೆ ನೋಡ್ತಿತ್ತು!!!!! ಅಣ್ಣಬಟ್ಟ ಕರೆಂಟ್ ಹೊಡೆದ ಕಾಗೆ!!!!
೬) ನನ್ನ ಮದ್ವೆ ಟೈಮ್ ಅಲ್ಲಿ ರಶ್ಮಿಗೆ ಕಾಲುಂಗುರ ತಕ ಬರ ಹೇಳಿ ನಂಗ ಎಲ್ಲ ಕುಮಟ ಗೆ ಹೋಗಿದ್ದ.ರಶ್ಮಿ ಕಾಲುಂಗುರ size ಗೊತ್ತಿಲ್ಲೆ ಆಗಿತ್ತು. ಅದ್ಕೆ ನಾನು ಅತ್ಗೆಗೆ ಹೇಳ್ದೆ" ತಡಿಯೇ, ನಾ ರಶ್ಮಿ ಹತ್ರನೇ ಕೆಳ್ತ್ಹ್ನೆ.ಅದ್ರ ಹಳೆ ಉಂಗುರದು ಸೈಜ್ ಅದ್ಕೆ ಗೊತ್ತಿರ್ತು ಹೇಳಿ "
ಅದ್ಕೆ ಅತ್ಗೆ " FYI ..ಮದ್ವೇಕಿಂಥ ಮುಂಚೆ ಯಾವ ಹೆಣ್ಮಕ್ಕನೂ ಕಾಲುಂಗುರ ಹಾಕ್ತ್ವಿಲ್ಲೇ " ಅಂತು .ನಾನು silent !! ಅದ್ಕೆ ಅನಂತ , ನನ್ನ cusin dilouge "ನಾಲ್ಕು ಜನ ದೊಡ್ಡವು ಇದ್ದಾಗ ಸಚ್ಚಿ ಅಣ್ಣಂಗೆ ಮಾತಾಡುಲೆ ಬಿಡುದಲ್ಲ ಹೇಳಿ " !!!!. ನಾನು still silent !!
7) Nov 1st ಕರ್ನಾಟಕ ರಾಜ್ಯೋತ್ಸವ ಹೇಳಿ ಎಲ್ಲರು ಕನ್ನಡಲ್ಲೇ ಮಾತಾಡ ಹೇಳಿ ಮಾಡಿದ್ದ. ಸುಮಾರು ಹೊತ್ತಿನವರೆಗೂ ಎಲ್ಲರು maintain ಮಾಡಿದ್ದ .Sudden ಆಗಿ ರಶ್ಮಿ " ಅಲ್ಲೆಂತಕ್ಕೆ light ಹಾಕಿಟ್ಟಿದ್ದ? ಸುಮ್ನೆ power waste " ಅಂತು.ನಾನು " ಹುಹಹಹಾ ....already ನೀನು ೩ word ಹೇಳ್ಬುತ್ತೆ ಅಂದೆ !!! .....ಅದ್ಕೆ ಅಣ್ಣಯ್ಯ " ನಿಂಗ ಎಲ್ಲ ಸೋತ್ರಿ.. ಎಲ್ಲರು ಆಂಗ್ಲಪದ ಉಪಯೋಗ್ಸಿದ್ರಿ ..ನಾನು ಮಾತ್ರ ಇನ್ನ್ನೂ ಕನ್ನಡದಲ್ಲೇ ಮಾತಾಡ್ತಿದ್ದೆ . ..Yes ! " ಅಂದ!!!...
-- keep watching many more to come